Sydney Kannada Sangha Next Program Sat 16th Nov 2024
ಸುಸ್ವಾಗತ
ಸಿಡ್ನಿ ಕನ್ನಡ ಸಂಘದ ಅಧೀಕೃತ ಅಂತರ್ಜಾಲ ಕ್ಷೇತ್ರಕ್ಕೆ ಸ್ವಾಗತ. ಸಿಡ್ನಿ ಕನ್ನಡ ಸಂಘವು ಸುಮಾರು ೪೦ ವರ್ಷಗಳಿಗೂ ಹಿಂದೆ ಹೆಮ್ಮೆಯ ಕನ್ನಡಿಗರಿಂದ ಪ್ರಾರಂಭಗೊಂಡು ತನ್ನ ೫೦ನೇನೇ ವಾರ್ಷಿಕೋತ್ಸವ ಆಚರಿಸುವತ್ತ ದಾಪುಗಾಲು ಹಾಕುತ್ತಿದೆ. ಪ್ರಾರಂಭದಲ್ಲಿ ಸ್ನೇಹಕೂಟ ಮತ್ತು ಹೊರಾಂಗಣ ವಿಹಾರಗಳಿಗೆ ಸೀಮಿತವಾಗಿದ್ದ ಸಂಘದ ಚಟುವಟಿಕೆಗಳು ಕನ್ನಡಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕರ್ನಾಟಕದಿಂದ ವಿವಿಧ ಕಲಾವಿದರುಗಳನ್ನು ಆಹ್ವಾನಿಸಿ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸುತ್ತ ಬಂದಿದೆ.
ಕನ್ನಡದ ಹಿರಿಯ ಸಾಹಿತಿಗಳಾದ ಶ್ರೀ. ಎಸ್. ಎಲ್. ಭೈರಪ್ಪ, ಜ್ಞಾನದೀಪ ಪ್ರಶಸ್ತಿ ವಿಜೇತ ದಿ. ಡಾ. ಗಿರೀಶ್ ಕಾರ್ನಾಡ್ ಮತ್ತು ವಿಶ್ವವಿಖ್ಯಾತ ಗಣೀತಜ್ಞೆ ದಿ. ಡಾ. ಶಕುಂತಲಾದೇವಿ ಅವರನ್ನು ಆದರಿಸಿ ಸನ್ಮಾನಿಸಿದೆ.
ಸಿಡ್ನಿ ಕನ್ನಡ ಸಂಘವು ಪ್ರತೀ ವರ್ಷ "ಕರ್ನಾಟಕ ರಾಜ್ಯೋತ್ಸವ" ಆಚರಿಸುವದಲ್ಲದೆ ಭಾರತದಿಂದ ಕಲಾವಿದರನ್ನು ಕರೆಯಿಸಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಕಾರ್ಯಕ್ರಮಗಳಲ್ಲಿ ಸ್ಥಳೀಯ ಕನ್ನಡಿಗರು ಮತ್ತು ಅವರ ಮಕ್ಕಳಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯನ್ನು ಒದಗಿಸುತ್ತ ಬಂದಿದೆ.
ಸಿಡ್ನಿ ಕನ್ನಡ ಸಂಘವು ಕನ್ನಡ ಭಾಷೆ, ಕಲೆ, ಇತಿಹಾಸ, ಜಾನಪದ, ಸಂಗೀತ ಮತ್ತು ಹಾಸ್ಯ ಕಲೆಗಳಿಗೆ ಪ್ರೋತ್ಸಾಹ ನೀಡುವುದಲ್ಲದೆ ಸಿಡ್ನಿಯ ಕನ್ನಡಿಗರು ಮತ್ತು ಯುವ ಪೀಳಿಗೆಗೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮಹದಾಸೆಯಿಂದ ಕೆಲಸ ಮಾಡುತ್ತಲಿದೆ. ಬನ್ನಿ ತಾವೂ ಕೂಡ ನಮ್ಮೊಂದಿಗೆ ಕೈ ಸೇರಿಸಿ ಕನ್ನಡ ಸೇವೆಯನ್ನು ಮುಂದುವರಿಸೋಣ.
ಸಂಘದ ಚಟುವಟಿಕೆಗಳು ಮತ್ತು ಹೆಚ್ಚಿನ ವಿವರಗಳಿಗೆ ನಮ್ಮ ಈ ಅಂತರ್ಜಾಲ ಕ್ಷೇತ್ರದ ವಿವಿಧ ಪುಟಗಳಿಗೆ ಭೇಟಿ ನೀಡಿ.
ಶೀಮತಿ ನಂದಾ ಶಿರೋಳ್
ಅಧ್ಯಕ್ಷರು
Mrs Nanda ShirolPresident
Welcome to SKS
Welcome to Sydney Kannada Sangha Website. Kannada Sangha is a
non-profit and charitable organisation serving the Kannada speaking community since 1982
in Sydney, and the rest of
New South Wales. Our aim is to actively
bridge the link with the land we left behind
SKS Trustees and Advisory Board
<
SKS Past Presidents
<
SKS Programs Image Gallery and Reports
Watch this space for more program gallery